Saturday, June 6, 2009

ಹೇಳಿ ಹೋಗು ಕಾರಣ

ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರಾಗುವ ಮೊದಲು

ಹೇಳಿ ಹೋಗು ಕಾರಣ ಹೋಗುವ ಮೊದಲು

ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ
ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ?
ಇಂದ್ಯಾವ ಬಂಧ ತೊಡರಿದೆ ನಿನ್ನ ಕಾಲಿಗೆ?
ಸುಡುಬೆಂಕಿ ಬೆಳಕು ಉಳಿಯಿತೇ ನನ್ನ ಪಾಲಿಗೆ?

ಹೇಳಿ ಹೋಗು ಕಾರಣ ಹೋಗುವ ಮೊದಲು

ಸವಿ ಭಾವಗಳಿಗೆ ನೀ ನಾದ ನೀಡಿ
ಜೊತೆಗೂಡಿ ಹಾಡಿದೆ
ಇಂದ್ಯಾವ ಅಳಲು ಸೆರೆ ಉಬ್ಬಿಕೊಳಲು
ನೀ ಮೌನ ತಾಳಿದೆ?
ನೀ ನೆಟ್ಟು ಬೆಳೆಸಿದ ಈ ಮರ ಫಲ ತೊಟ್ಟ ವೇಳೆಗೆ
ಹೀಗೇಕೆ ಮುರಿದು ಮಲಗಿದೆ ಯಾವ ಧಾಳಿಗೆ?

ಹೇಳಿ ಹೋಗು ಕಾರಣ ಹೋಗುವ ಮೊದಲು

Wednesday, June 3, 2009

ಈ ಬೀದಿಯಲ್ಲಿ ನ ಓಡಾಡಿದ್ದೆ

ಈ ಬೀದಿಯಲ್ಲಿ ನ ಓಡಾಡಿದ್ದೆ ಬೇಕಾದಷ್ಟು ಸಲ
ಈ ನಗರದ ಎಲ್ಲ ಬೀದಿಗಳಂತೆ ಧೂಳು ಹೊಗೆ ಗದ್ದಲ
ನಲ್ಲೆ ನಿನ್ನ ಮನೆ ಇಲ್ಲೇ ಇರುವುದೆಂದು ತಿಳಿದ ಒಡನೆಯೇ
ಎಂಥ ಚೆಲುವು ಬಂತು ಬೀದಿಗೆ ಎಂಥಾ ಪರಿಮಳ

ಈ ಬೀದಿಯಲ್ಲಿ ನ ಓಡಾಡಿದ್ದೆ ಬೇಕಾದಷ್ಟು ಸಲ
ಈ ನಗರದ ಎಲ್ಲ ಬೀದಿಗಳಂತೆ ಧೂಳು ಹೊಗೆ ಗದ್ದಲ

ಧೂಳು ಈಗ ಧೂಳಲ್ಲ
ನನಗದೆ ಪುಷ್ಪ ಪರಾಗ ರೇಣು
ಕಿವಿಗಡಚಿಕ್ಕುವ ಹಾರನ್ನುಗಳೇ
ಈಗ ಇಂಪಾದ ವೇಣು
ಬಸ್ಸು ಲಾರಿಯ ಹೊಗೆ ನಲ್ಲೆ ಅಗರು ಧೂಪ ನನಗೆ
ನೀನಿರುವೆಡೆಯೇ ನನಗೆ ನಂದನ ನೀನೆ ಕಾಮಧೇನು

ಈ ಬೀದಿಯಲ್ಲಿ ನ ಓಡಾಡಿದ್ದೆ ಬೇಕಾದಷ್ಟು ಸಲ
ಈ ನಗರದ ಎಲ್ಲ ಬೀದಿಗಳಂತೆ ಧೂಳು ಹೊಗೆ ಗದ್ದಲ

ನಿನ್ನ ಮನೆಯೆ ದೇವಾಲಯ
ದೇವಿ ನಾನು ನಿನ್ನ ಭಕ್ತ
ಯಾರು ನಕ್ಕರು ಕೇರು ಮಾಡದೆ
ನಿಂತಿರುವೆನು ಅನುರಕ್ತ
ನಿನ್ನ ಮನೆಯ ಮುಂದೆ ನೆಟ್ಟ ಗರುಡಗಂಬದಂತೆ ನಲ್ಲೆ
ನಿನ್ನ ದರುಶನಕಾಗಿ ನಾ ಹಂಬಲಿಸುತ್ತಾ
ನಿಂತಿರುವೆನು ಅನುರಕ್ತ ನಾನು ನಿನ್ನ ಭಕ್ತ

ಈ ಬೀದಿಯಲ್ಲಿ ನ ಓಡಾಡಿದ್ದೆ ಬೇಕಾದಷ್ಟು ಸಲ
ಈ ನಗರದ ಎಲ್ಲ ಬೀದಿಗಳಂತೆ ಧೂಳು ಹೊಗೆ ಗದ್ದಲ

ಕರುಣಿಸಿ ನಿನ್ನ ಭಕ್ತನಮೇಲೆ
ಬಾರೆ ನೀ ಹೊರಗೆ
ಕಿಟಕಿಯನ್ನು ತೆರೆದಾದರು ಒಮ್ಮೆ
ನೋಡೇ ಈ ಕಡೆಗೆ
ಪ್ರೀತಿಯ ಒಂದು ನಗೆ ಸಿಕ್ಕರೆ ಅದೇ ಸಾಕು ನನಗೆ
ಬದುಕಿ ಉಳಿಯುವೆನು ಭರವಸೆಯಲ್ಲಿ ನಾನು ನಾಳೆಯವರೆಗೆ

ಈ ಬೀದಿಯಲ್ಲಿ ನ ಓಡಾಡಿದ್ದೆ ಬೇಕಾದಷ್ಟು ಸಲ
ಈ ನಗರದ ಎಲ್ಲ ಬೀದಿಗಳಂತೆ ಧೂಳು ಹೊಗೆ ಗದ್ದಲ

Sunday, May 24, 2009

ಮುನಿಸು ತರವೇ ಮುಗುದೆ....

ಮುನಿಸು ತರವೇ ಮುಗುದೆ
ಹಿತವಾಗಿ ನಗಲು ಬಾರದೆ

ಕರಿಮುಗಿಲ ಬಾನಿನಲ್ಲಿ ಮಿಂಚರಳಲೂ
ತಾರೆಗಳು ಮೈಯ ಬಳಸಿ ಝುಮ್ ಎನ್ನಲು
ನವ ಭ್ಹವ ತುಂಬಿ ತುಂಬಿ ಮನ ಹಾಡಲು
ತೆರೆದಂತಿದೆ ಭಾಗ್ಯದ ಬಾಗಿಲೂ ಮುನಿಸು

ಎಸ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ
ಜೀವನದ ನೂರು ಕನಸು ನನಸಾಗಿದೆ
ಮುನಿಸೇತಕೆ ಈ ಬಗೆ ಮೂಡಿದೆ ಮುನಿಸು

ಹೊಸ ಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀ ಮನ
ವಾಗರ್ಥದಂತೆ ನಮ್ಮ ಈ ಮೈ
ಮನ ಜತೆ ಸೇರಲು ಜೀವನ ಪಾವನ ಮುನಿಸು

ಭಾವಗೀತೆಗಳ ಸಂಪುಟ

ಕ್ಷಣಗಳ ದೋಣಿಗೆ ಎಲ್ಲಿಯ ರೇವು???? ರಾಗ: ಮಿಶ್ರ ಹಂಸಾನಂದಿ

ಕ್ಷಣಗಳ ದೋಣಿಗೆ ಎಲ್ಲಿಯ ರೇವು
ತಾಣವ ಹುಡುಕಿದೆ ನೆನಪು ೨
ಎದ್ದಿವೆ ರಜಗಳು ಪದಗಳ ಹತಿಗೆ
ಕಾಣದ ಸೋಕಿನ ಬಿಸುಪು ಊ ಊ ಊ ಕಾಣದ ಸೋಕಿನ ಬಿಸುಪು ೨

ಒಲ್ಲದ ವೀಣೆಗೆ ಇಲ್ಲದ ತಂತಿ
ಮಿಡಿದರೆ ಸಲ್ಲದ ಗಾನ
ವಿರತಿಯ ಹೊಲದೊಳು ಮೊಳೆತನು ಭಾವ
ಮೀರದೆ ತೀರದ ಯಾನ ಆ ಆ ಆ ಮೀರದೆ ತೀರದ ಯಾನಾ ೨

ನಿನ್ನೆಯ ಕಾಲಿಗೆ ಇಂದಿನ ಗೆಜ್ಜೆ
ನಾಳೆಯ ದನಿ ಅಣುರಣನ
ಮರೆವಿನ ವೇದಿಕೆ ಎದುರಿನ ತೆರೆಯು
ಸರಿಯಲು ಸಾರ್ಥಕ ಪಯಣ ಆ ಆ ಆ ಸರಿಯಲು ಸಾರ್ಥಕ ಪಯಣ ೨